

28.02.25 ರ ಶುಕ್ರವಾರ ಇಂದು ಬೆಳಗ್ಗೆ ಶಿವಮೊಗ್ಗ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಚೈತನ್ಯ ಸೌಧದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಶಿವಮೊಗ್ಗ ಜಿಲ್ಲೆ ಮತ್ತು ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಶಿವಮೊಗ್ಗ ಇದರ ಸಹಯೋಗದೊಂದಿಗೆ ಭಾರತೀಯ ರೀಸರ್ವ್ ಬ್ಯಾಂಕ್ ಬೆಂಗಳೂರು ಇದರ ಮಾರ್ಗ ಸೂಚಿಯಂತೆ ಸ್ವ ಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಲೀಡ್ ಬ್ಯಾಂಕ್ (ಎಲ್ ಡಿ ಎಂ) ಬಿ ಚಂದ್ರಶೇಖರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಬಾರ್ಡ್ ಡಿ ಡಿ ಎಂ ಶರತ್ ಪಿ ಗೌಡ ಲೀಡ್ ಬ್ಯಾಂಕ್ ಆಫೀಸರ್ ಹೊನ್ನಪ್ಪ ಹಾಗೂ ಎಫ್ ಎಲ್ ಸಿ ಶಂಕರಪ್ಪ,ಕರ್ನಾಟಕ ಗ್ರಾಮೀಣ ಬ್ಯಾಂಕ್ ರಿಜಿನಲ್ ಮ್ಯಾನೇಜರ್ ಶ್ರೀಮತಿ ಶಾರದಮ್ಮ, ರುಡ್ ಸೆಟ್ ನಿರ್ದೇಶಕರಾದ ಕಾಂತೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಶಿವಮೊಗ್ಗ ವಿಭಾಗದ ನಿರ್ದೇಶಕರಾದ ಮುರಳಿಧರ್ ಶೆಟ್ಟಿ ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.