
ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಶಿವಮೊಗ್ಗ
ಸಂವಿಧಾನ ಸನ್ಮಾನ ಅಭಿಯಾನದ ಪ್ರಯುಕ್ತ ದಿನಾಂಕ: 06-02-2025 ಗುರುವಾರ ಸಂಜೆ 6.00 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ “ಸಂವಿಧಾನ ಬದಲಾಯಿಸಿದ್ದು ಯಾರು” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾನ್ಯ B.L. ಸಂತೋಷ್ (ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ) ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ನಮ್ಮ ಶಿವಮೊಗ್ಗದವರೇ ಆದ ಡಾ|| ಭೀಮಪ್ಪ ರಾಮಪ್ಪ ತಹಶೀಲ್ದಾರ್, ಖ್ಯಾತ Orthopaedic Surgeon ರವರು ವಹಿಸಲಿದ್ದಾರೆ. ಅದೇ ರೀತಿ ಮುಖ್ಯ ಅತಿಥಿಗಳಾಗಿ ಖ್ಯಾತ ಉದ್ಯಮಿಗಳಾದಂತಹ ಪರಶುರಾಮ್ರವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕದ ಕರ್ತೃ ಉದಯೋನ್ಮುಖ ಬರಹಗಾರ ವಿಕಾಸ್ ಪತ್ತೂರು ಉಪಸ್ಥಿತರಿದ್ದು ಪುಸ್ತಕದ ಆಶಯವನ್ನು ತಿಳಿಸಲಿದ್ದಾರೆ. ಈ ಸಮಾರಂಭದಲ್ಲಿ ಮಾನ್ಯ ಕೋಟಾ ಶ್ರೀನಿವಾಸ್ ಪೂಜಾರಿಯವರು, (ಲೋಕಸಭಾ ಸದಸ್ಯರು ಉಡುಪಿ-ಚಿಕ್ಕಮಂಗಳೂರು) ಶ್ರೀಮಹೇಂದ್ರ ಕೌತಾಳಾರವರು ಉಪಸ್ಥಿತಿತರಿದ್ದು ತಮ್ಮ ವಿಚಾರ ಮಂಡಿಸಲಿದ್ದಾರೆ. ಶಿವಮೊಗ್ಗದ ವಿವಿಧ ಸಂಘ ಸಂಸ್ಥೆಗಳು, ಎಲ್ಲಾ ಸಮಾಜದ ಜಾತಿ ಸಂಘಟನೆಗಳ ಸದಸ್ಯರು, ಯುವಕ ಸಂಘಗಳ ಸದಸ್ಯರು. ಎಲ್ಲಾ ಪಜ್ಞಾವಂತ ನಾಗರೀಕರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸಿಗೊಳಿಸಬೇಕಾಗಿ ಸಿ.ಹೆಚ್.ಮಾಲತೇಶ್ ಕಾರ್ಯಕ್ರಮ ಜಿಲ್ಲಾ ಸಂಚಾಲಕರು ವಿನಂತಿಸಿದ್ದಾರೆ.