
ಶಿವಮೊಗ್ಗ: ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು. ಇಂತಹ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು. ಸಾಹಿತ್ಯದ ಮೂಲಕ ಸಂಸ್ಕೃತಿಯ ಮಹತ್ವ ಸಾರಬೆಕೆಂದು ಶಾಸಕ, ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ ಕರೆ ನೀಡಿದರು.
ಸಹಚೇತನ ನಾಟ್ಯಾಲಯದ ವತಿಯಿಂದ ನಗರದಲ್ಲಿ 30-03-2025ರ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯುಗಾದಿ ಅಂಗವಾಗಿ ಪ್ರಕಟಿಸಿರುವ 15ನೇ ವರ್ಷದ ಕವಿ ಕಂಡ ಯುಗಾದಿ-2025 ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಸಮಾಜ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಸಂಪ್ರದಾಯ, ನಂಬಿಕೆ, ಪದ್ಧತಿ ಮತ್ತು ಮೌಲ್ಯಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ವಿವಿಧ ಧರ್ಮಗಳು, ಉಪಭಾಷೆಗಳು, ಭೌಗೋಳಿಕ ಸ್ಥಳ, ಭೌಗೋಳಿಕ ಗಡಿಗಳು ಮತ್ತು ಸಾಮಾಜಿಕ ಸಾಮರಸ್ಯದ ಏಕತೆಯು ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ಆಚರಣೆಗಳನ್ನು ಆಚರಣೆಗಳಿವೆ. ವಿವಿಧ ಪ್ರದೇಶಗಳು ವಿಭಿನ್ನ ಹಬ್ಬಗಳನ್ನು ವಿಶಿಷ್ಟ ಶೈಲಿಯೊಂದಿಗೆ ಆಚರಿಸುತ್ತವೆ. ಅವು ಕಾಲೋಚಿತ ಪ್ರಕೃತಿಯಲ್ಲಿರುತ್ತವೆ ಮತ್ತು ಹವಾಮಾನಕ್ಕೆ ಸಂಬಂಧಿಸಿವೆ. ಯುಗಾದಿ ಕೂಡ ಇದರಲ್ಲಿ ಪ್ರಮುಖವಾದುದು ಎಂದು ತಿಳಿಸಿದರು.
ಭಾರತೀಯ ಸಂಪ್ರದಾಯದಲ್ಲಿ ನಂಬಿಕೆಗಳು, ಆಚರಣೆಗಳು ಮತ್ತು ಪಾಕಪದ್ಧತಿ ಎಂಬ ಅಂಸಗಳಿವೆ. ಅದರ ಇತಿಹಾಸದೊಂದಿಗೆ ಭಾರತೀಯ ಸಂಸ್ಕೃತಿಯ ಸಾರವನ್ನು ರೂಪಿಸಲು ಸಹಾಯ ಮಾಡಿದೆ. ಭಾರತೀಯ ಸಂಪ್ರದಾಯಗಳ ನಡುವೆ ಹೆಚ್ಚಿನ ಪ್ರಮಾಣದ ವೈವಿಧ್ಯತೆ ಮತ್ತು ಸಾಮ್ಯತೆಗಳಿರುವುದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಸಹಚೇತನ ನಾಟ್ಯಾಲಯವು ಕಳೆದ 14 ವರ್ಷಗಳಿಂದ ಹೊರತಂದಿರುವ ಕವಿ ಕಂಡ ಯುಗಾದಿ ಕವನ ಸಂಕಲನವು ಸಂಗ್ರಹ ಯೋಗ್ಯವಾಗಿವೆ. ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂಬ ವಾತಾವರಣದ ನಡುವೆಯೂ ನಿರಂತರವಾಗಿ ಕವನ ಸಂಕಲನ ಹೊರತರುವ ಮೂಲಕ ಸಹಚೇತನ ನಾಟ್ಯಾಲಯವು ತನ್ನದೇ ಆದಂತಹ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚೇತನ್, ಸಹನಾ ಚೇತನ್, ಡಾ. ನಾಗಮಣಿ, ಆನಂದ ರಾಮ್, ವಿನಯ್, ಉಷಾರಾಣಿ, ಮಾಲತೇಶ್, ದಿನೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
