Skip to content
saarathilive

saarathilive

Your brand our Voice

  • Home
  • Our Channel
  • Services
  • E-store
  • News
  • About

ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Posted on May 31, 2025June 4, 2025 By Saarathi Live No Comments on ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು
Local News, News
Spread the love

ಶಿವಮೊಗ್ಗ: ಮನುಷ್ಯನ ದುಃಖಕ್ಕೆ ಕಾರಣವೇನು ಎಂಬುದನ್ನು ಅರಿಯಲು ಅರಮನೆ ತೊರೆದವ ಬುದ್ಧನಾದ. ಇದಕ್ಕೆ ಕಾರಣ ಹುಡುಕುವ ಸಲುವಾಗಿ 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಆರಂಭಿಸಿದರು. ಭಿನ್ನ ಕಲ್ಪನೆಯ ಅನುಭವ ಮಂಟಪ ಜನರಿಗೆ ಜ್ಞಾನ ಹಂಚುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಶಿವಗಂಗಾ ಯೋಗ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ “ಬಾಳ ಬೆಳಕು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಯಸಿದ್ದೆಲ್ಲವೂ ಸಿಗಬೇಕು. ಹಾಗೆ ಸಿಕ್ಕಿದ್ದು ಎಂದಿಗೂ ತನ್ನಿಂದ ದೂರಾಗಬಾರದು ಎಂಬುದು ಮನುಷ್ಯನ ಆಸೆ. ಇವೇ ಕಾರಣದಿಂದಾಗಿಯೇ ಜಗತ್ತಿನಲ್ಲಿ ಯುದ್ಧಗಳು ಸಂಭವಿಸಿವೆ. ಇಂದಿನ ಎಲ್ಲ ಸ್ಪರ್ಧೆಗಳಿಗೂ ಇದೇ ಕಾರಣವಾಗಿದೆ ಎಂದರು.
ಮನುಷ್ಯನ ದುಃಖ, ನೋವುಗಳಿಗೆ ಅಜ್ಞಾನವೇ ಕಾರಣ. ಸಾವಿನ ನಂತರ ನಮ್ಮ ಆಸ್ತಿಯಲ್ಲಿ ಅನೇಕರು ಪಾಲು ಕೇಳಬಹುದು. ಆದರೆ ನಮ್ಮ ಪಾಪದ ಪಾಲನ್ನು ಹಂಚಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಅದೇ ರೀತಿ ನಮ್ಮ ಸಂತೋಷದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ಆದರೆ ದುಃಖವನ್ನು ಹಂಚಿಕೊಳ್ಳುವವರು ಯಾರೂ ಇಲ್ಲ ಎಂಬ ಸಂಗತಿ ನಮಗೆ ತಿಳಿದಿರಬೇಕು ಎಂದು ಹೇಳಿದರು.ದುಃಖದಿಂದ ಮನುಷ್ಯ ಮುಕ್ತನಾಗಬೇಕು. ಅನೇಕ ಸಂಗತಿಗಳನ್ನು ಮನುಷ್ಯ ಮರೆಯಲು ಬಯಸುತ್ತಾನೆ. ಆದರೂ ಅವು ಮನುಷ್ಯನ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತವೆ. ಕೆಲವು ಮಾತುಗಳನ್ನು ಮರೆಯವುದು ಅಷ್ಟು ಸುಲಭವಲ್ಲ. ಮನುಷ್ಯನ ಮನಸ್ಸು ಅಂತರಂಗದಲ್ಲಿ ನಿ೦ತಾದ ದುಃಖದಿಂದ ಮುಕ್ತಿ ಸಿಗುತ್ತದೆ. ಮನಸ್ಸಿಗೆ ಒಳ್ಳೆಯದು ನೀಡಿದಾಗ ದುಃಖ ದೂರಾಗುತ್ತದೆ. ಎಲ್ಲವನ್ನೂ ತ್ಯಜಿಸಿದ ಅಕ್ಕಮಹಾದೇವಿ ತನಗಿಂತ ಪರಮಸುಖಿ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಎಲ್ಲವನ್ನೂ ಹೊಂದಿರುವ ನಾವು ದುಃಖಿಗಳಾಗಿದ್ದೇವೆ ಎಂದರು.

ತುಂಬಿ ತುಳುಕಿದ ಕುವೆಂಪು ರಂಗ ಮಂದಿರ
ಕೊಪ್ಪಳ ಶ್ರೀಗಳ ಮಾತು ಕೇಳಲು ಜನ ಕಿಕ್ಕಿರಿದು ಸೇರಿದ್ದರು. ಕುರ್ಚಿಗಳನ್ನು ಸಭಾಂಗಣದ ಸುತ್ತಲಿನ ಕಾರಿಡಾರ್‌ನಲ್ಲಿ ಹಾಕಲಾಗಿತ್ತು. ವೇದಿಕೆ ಮೇಲಿನ ಖಾಲಿ ಜಾಗದಲ್ಲೂ ಜನರು ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಹಲವು ಮಂದಿ ನಿಂತುಕೊಂಡೇ ಉಪನ್ಯಾಸ ಆಲಿಸಿದರು. ಬಹಳ ದಿನಗಳ ಬಳಿಕ ಕುವೆಂಪು ರಂಗಮಂದಿರ ಜನರಿಂದ ತುಂಬಿ ತುಳುಕಿತು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಶಿವಂಗಂಗಾ ಯೋಗ ಕೇಂದ್ರದ ಯೋಗಗುರು ರುದ್ರಾರಾಧ್ಯ, ಪ್ರಮುಖರಾದ ಉಮೇಶ್‌ ಆರಾಧ್ಯ ಮೊದಲಾದವರಿದ್ದರು.

ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಈ ಕಾರ್ಯಕ್ರಮದ ಅದ್ಭುತ ಮಾತನ್ನು ಕೇಳಲು, ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/RdFqH1FCTHY?si=Pp0GePsx32CSScXT

Post navigation

❮ Previous Post: ಅದ್ಭುತ ಸಂಘಟಕ ‘ಮರೆಯಲಾಗದ ಮೇಷ್ಟ್ರು’ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಸವಿನೆನಪು
Next Post: 0xc79c1e07 ❯

You may also like

National News
Make in India
January 18, 2025
News
0x1c8c5b6a
August 3, 2025
Local News
17ರ ಶನಿವಾರ ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣ ಗ್ರಂಥ ‘ಕೃಷ್ಣಸ್ಮೃತಿ ಬಿಡುಗಡೆ
May 15, 2025
Local News
ಭದ್ರಾವತಿಯ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ
March 1, 2025

Leave a Reply Cancel reply

Your email address will not be published. Required fields are marked *

Recent Posts

  • 0x1c8c5b6a
  • 0x1c8c5b6a
  • 0x1c8c5b6a
  • 0xc79c1e07
  • ಮನುಷ್ಯನ ದುಃಖಕ್ಕೆ ಅಜ್ಞಾನವೇ ಕಾರಣ – ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು

Recent Comments

  1. Chethan S. on ಆತ್ಮೀಯವಾದ ಆಮಂತ್ರಣ – ಸಹಚೇತನ ನಾಟ್ಯಾಲಯ (ರಿ.), ಶಿವಮೊಗ್ಗ

Archives

  • September 2025
  • August 2025
  • May 2025
  • April 2025
  • March 2025
  • February 2025
  • January 2025

Categories

  • International news
  • Local News
  • National News
  • News
  • Promotions
  • Home
  • Our Channel
  • Services
  • E-store
  • News
  • About

Copyright © 2025 saarathilive.

Theme: Oceanly News by ScriptsTown

Go to mobile version