ಕು. ಬಿ.ಎಂ. ಮೇಘನಾ ಡಾ. ಎ.ಎಸ್. ವತ್ಸಲಾ, ಡಿವಿಎಸ್ ಸೀನಿಯರ್ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರು ಹಾಗೂ ನ್ಯಾಯವಾದಿಗಳಾದ ಬಿ. ಜಿ. ಮೋಹನ್ ಕುಮಾರ್ ಇವರ ಮಗಳು ಲೋಕ ಸೇವಾ ಆಯೋಗ ನಡೆಸುವ ಐಎಎಸ್ ಪರೀಕ್ಷೆಯಲ್ಲಿ 421 ರ್ಯಾಂಕ್ ಗಳಿಸಿ ತೇರ್ಗಡೆಯಾಗಿದ್ದಾರೆ. ಪ್ರವೃತ್ತಿಯಲ್ಲಿ ಭರತನಾಟ್ಯ, ಸಂಗೀತ ಹಾಗೂ ಗಮಕಿಯಾಗಿ ಕಲಾಸೇವೆಯಲ್ಲೂ ನಿರತಳಾಗಿದ್ದಾಳೆ.
ಸಹಚೇತನ ನಾಟ್ಯಾಲಯದ ವಿದ್ಯಾರ್ಥಿನಿಯಾದ ಇವರನ್ನು ಶಿವಮೊಗ್ಗ ನಗರದ ಶಾಸಕರು ಹಾಗೂ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಸಹಚೇತನ ನಾಟ್ಯಾಲಯದ ಕಾರ್ಯದರ್ಶಿ ನೃತ್ಯಗುರು ಸಹನಾ ಚೇತನ್ ಹಾಗೂ ನಿರ್ದೇಶಕ ಮಂಡಳಿ ಹಾಗೂ ಪೋಷಕವರ್ಗ ಹೃತ್ಪೂರ್ವಕವಾಗಿ ಅಭಿನಂದಿಸಿದೆ…

